New Ration Card Update: ಗುಡ್ ನ್ಯೂಸ್! ರೇಷನ್ ಕಾರ್ಡ್ ತಿದ್ದುಪಡಿ ಆರಂಭ! ಈ ಎಲ್ಲಾ ದಾಖಲೆಗಳು ಕಡ್ಡಾಯ! ಇಲ್ಲಿದೆ ಪೂರ್ತಿ ಮಾಹಿತಿ!
New Ration Card Update: ಎಲ್ಲರಿಗೂ ನಮಸ್ಕಾರ ಸ್ನೇಹಿತರೆ ಈ ಒಂದು ಲೇಖನಿಗೆ ತಮ್ಮೆಲ್ಲರಿಗೂ ಸ್ವಾಗತ ರೇಷನ್ ಕಾರ್ಡ್ ತಿದ್ದುಪಡಿಗೆ ಸರ್ಕಾರವು ಅವಕಾಶ ಕಲ್ಪಿಸಿ ಕೊಟ್ಟಿದೆ. ಈ ಒಂದು ಲೇಖನದ ಮೂಲಕ ತಮಗೆ ತಿದ್ದುಪಡಿ ಮಾಡಿಸಲು ಸರ್ಕಾರವು ನೀಡಿರುವ ಕೊನೆಯ ದಿನಾಂಕ ಯಾವುದು ಹಾಗೂ ತಿದ್ದುಪಡಿ ಮಾಡಿಸಲು ಯಾವೆಲ್ಲ ಪ್ರಮುಖ ದಾಖಲೆಗಳು ಬೇಕು ಮತ್ತು ಹೊಸ ರೇಷನ್ ಕಾರ್ಡ್ ಮಾಡಿಸಲು ಅವಕಾಶ ಇದೆಯಾ ಅಥವಾ ಇಲ್ಲವ ಎಂಬ ಸಂಪೂರ್ಣ ಮಾಹಿತಿಯನ್ನು ಈ ಲೇಖನದಲ್ಲಿ ನೀಡಲಾಗಿದೆ ಪೂರ್ತಿಯಾಗಿ ಓದಿ.
ನಾವು ರೇಷನ್ ಕಾರ್ಡ್ ಅವಶ್ಯಕತೆಯನ್ನು ಗಮನಿಸಿದರೆ ಇಂದಿನ ದಿನದಲ್ಲಿ ರೇಷನ್ ಕಾರ್ಡ್ ಎಲ್ಲಾ ಯೋಜನೆಗಳು ಲಾಭಗಳನ್ನು ಪಡೆದುಕೊಳ್ಳಲು ಒಂದು ಅತ್ಯಂತ ಪ್ರಮುಖ ದಾಖಲೆಯಾಗಿದೆ. ಸರ್ಕಾರದ ಎಲ್ಲಾ ಯೋಜನೆಗಳ ಲಾಭವನ್ನು ಪಡೆದುಕೊಳ್ಳಲು ಕೂಡ ಮೊದಲು ಕೇಳುವುದು ರೇಷನ್ ಕಾರ್ಡ್. ಸಾಕಷ್ಟು ಜನರು ಹೊಸ ರೇಷನ್ ಕಾರ್ಡ್ ಮಾಡಿಸಲು ಹಾಗೂ ರೇಷನ್ ಕಾರ್ಡ್ ತಿದ್ದುಪಡಿ ಮಾಡಿಸಿಕೊಳ್ಳಲು ಕಾಯುತ್ತಿದ್ದರು ಅವರೆಲ್ಲರಿಗೂ ಸಹ ಸರ್ಕಾರವು ಸಕ್ಕತ್ ಸಿಹಿ ಸುದ್ದಿ ನೀಡಿದೆ.
ಆದರೆ ಹೊಸದಾಗಿ ರೇಷನ್ ಕಾರ್ಡ್ ಮಾಡಿಸಲು ಸರ್ಕಾರವು ಯಾವುದೇ ರೀತಿಯಾದ ಅವಕಾಶವನ್ನು ನೀಡಿಲ್ಲ. ಕೇವಲ ರೇಷನ್ ಕಾರ್ಡ್ ತಿದ್ದುಪಡಿಗೆ ಮಾತ್ರ ಅವಕಾಶವನ್ನು ಕಲ್ಪಿಸಿಕೊಟ್ಟಿದೆ ಎಲ್ಲಿಯವರೆಗೆ ಸರ್ಕಾರ ರೇಷನ್ ಕಾರ್ಡ್ ತಿದ್ದುಪಡಿ ಮಾಡಲು ಅವಕಾಶ ನೀಡಿದೆ ಕೊನೆ ದಿನಾಂಕ ಯಾವುದು ತಿದ್ದುಪಡಿ ಮಾಡಬಹುದು ಎಂಬ ಸಂಪೂರ್ಣ ಮಾಹಿತಿಯನ್ನು ಈ ಲೇಖನದಲ್ಲಿ ನೀಡಲಾಗಿದೆ.
ರೇಷನ್ ಕಾರ್ಡ್ ನಲ್ಲಿ ಏನೇನೋ ತಿದ್ದುಪಡಿ ಮಾಡಬಹುದು?
- ಕುಟುಂಬ ಸದಸ್ಯರ ಹೆಸರು ತೆಗೆಸುವುದು ಅಥವಾ ಸೇರಿಸುವುದು ಮಾಡಬಹುದು.
- ಹೊಸ ಸದಸ್ಯರ ಹೆಸರನ್ನು ಕೂಡ ಸೇರಿಸಿಕೊಳ್ಳಬಹುದು.
- ಎಲ್ಲ ಕುಟುಂಬ ಸದಸ್ಯರ ಈ-ಕೆ ವೈ ಸಿ ಮಾಡಲು ಅವಕಾಶ ನೀಡಿದೆ.
- ಕುಟುಂಬ ಮುಖ್ಯಸ್ಥರ ಬದಲಾವಣೆಯನ್ನು ಮಾಡಿಸಿಕೊಳ್ಳಬಹುದು.
- ವಿಳಾಸವನ್ನು ಬದಲಾವಣೆ ಮಾಡಿಕೊಳ್ಳಬಹುದು.
- ನ್ಯಾಯ ಬೆಲೆ ಅಂಗಡಿಯನ್ನು ಸಹ ಬದಲಾವಣೆ ಮಾಡಿಕೊಳ್ಳುವುದು.
- ರೇಷನ್ ಕಾರ್ಡನ್ನು ಆಧಾರ್ ಕಾರ್ಡಿಗೆ ಲಿಂಕ್ ಮಾಡಿಕೊಳ್ಳಬಹುದು..
- ರೇಷನ್ ಕಾರ್ಡ್ ಗೆ ಸಂಬಂಧಿಸಿದ ಎಲ್ಲಾ ತಿದ್ದುಪಡಿಯನ್ನು ಕೂಡ ಮಾಡಿಕೊಳ್ಳಬಹುದು.
ಯಾವೆಲ್ಲ ದಾಖಲೆಗಳು ಬೇಕಾಗುತ್ತದೆ?
- ಕುಟುಂಬ ಸದಸ್ಯರ ಆಧಾರ್ ಕಾರ್ಡ್
- ತಮ್ಮ ಬಳಿ ಇರುವ ರೇಷನ್ ಕಾರ್ಡ್
- ಮಕ್ಕಳು ಜನನ ಪ್ರಮಾಣ ಪತ್ರ (ಐದು ವರ್ಷದ ಒಳಗಿನ ಮಕ್ಕಳಿದ್ದರೆ ಮಾತ್ರ)
- ಆದಾಯ ಪ್ರಮಾಣ ಪತ್ರ
- ಜಾತಿ ಪ್ರಮಾಣ ಪತ್ರ
- ರೇಷನ್ ಕಾರ್ಡ್ ಹಾಗೂ ಆಧಾರ್ ಕಾರ್ಡ್ ಗೆ ಲಿಂಕ್ ಇರುವ ಮೊಬೈಲ್
ರೇಷನ್ ಕಾರ್ಡ್ ತಿದ್ದುಪಡಿ ಮಾಡಲು ಕೊನೆಯ ದಿನಾಂಕ ಯಾವುದು?
ರೇಷನ್ ಕಾರ್ಡ್ ತಿದ್ದುಪಡಿಗಾಗಿ ಸರ್ಕಾರವು ಡಿಸೆಂಬರ್ ತಿಂಗಳ ಎರಡನೇ ವಾರ ದಿಂದ ರಾಜ್ಯದ ಎಲ್ಲಾ ಜನರಿಗೂ ಸಹ ಅವಕಾಶವನ್ನು ನೀಡಿದೆ. ಮಧ್ಯದಲ್ಲಿ ನೀಡಿದ್ದ ಅವಕಾಶ ಅವಧಿ ಮೀರಿದ್ದರಿಂದ ತಿದ್ದುಪಡಿಗೆ ನಿಗದಿಪಡಿಸಿದ್ದ ಕೊನೆ ದಿನಾಂಕವನ್ನು ಇದೀಗ ಸರ್ಕಾರವು ಮತ್ತೆ ವಿಸ್ತರಣೆ ಮಾಡುವ ಮೂಲಕ ಮತ್ತೊಮ್ಮೆ ಜನರಿಗೆ ಕಾಲಾವಕಾಶ ನೀಡಿದೆ.
Gruhalakshmi Scheme: ಗೃಹಲಕ್ಷ್ಮಿ 16ನೇ ರೂ.4,000 ಹಣ ಈ ದಿನ ಜಮಾ.! ಪೆಂಡಿಂಗ್ ಹಣ ಪಡೆಯಲು ಈ ಕೆಲಸ ಮಾಡಿ
ಜನವರಿ 1ನೇ ತಾರೀಖಿನಿಂದ ಹಿಡಿದು ಜನವರಿ 31 ನೇ ತಾರೀಖಿನವರೆಗೂ ಕೂಡ ನಮ್ಮ ರಾಜ್ಯದ ಜನರಿಗೆ ನಮ್ಮ ರೇಷನ್ ಕಾರ್ಡ್ ನಲ್ಲಿ ಯಾವುದಾದರೂ ತಿದ್ದುಪಡಿಗಳಿದ್ದರೆ ಹಾಗೂ ಏನಾದರೂ ತಪ್ಪುಗಳಿದ್ದರೆ ಸರಿಪಡಿಸಿಕೊಳ್ಳಲು ಅವಕಾಶವನ್ನು ಕಲ್ಪಿಸಿಕೊಡಲಾಗಿದೆ. ತಿದ್ದುಪಡಿ ಮಾಡಿಸಿಕೊಳ್ಳಲು ಬಯಸುವ ಜನರು ಬೆಳಿಗ್ಗೆ 10 ಗಂಟೆಯಿಂದ ಸಂಜೆ 5:00 ವರೆಗೆ ತಮ್ಮ ಸಮೀಪದ ಯಾವುದಾದರೂ ಒಂದು ಸಹಾಯ ಕೇಂದ್ರದಲ್ಲಿ ಅಂದರೆ (ಗ್ರಾಮ ಒನ್, ಬೆಂಗಳೂರು ಒನ್, ಕರ್ನಾಟಕ ಒನ್) ಈ ಕೇಂದ್ರಗಳಲ್ಲಿ ತಿದ್ದುಪಡಿಯನ್ನು ನಿಗದಿಪಡಿಸಿದ ಸಮಯದೊಳಗೆ ಮಾಡಿಕೊಳ್ಳಬಹುದು..