KSRTC ಬಸ್ನಲ್ಲಿ ಪ್ರಯಾಣ ಮಾಡುವ ಜನರಿಗೆ ಗುಡ್ ನ್ಯೂಸ್: ಹೊಸ ನಿಯಮಗಳು ಹಾಗೂ ಸೌಲಭ್ಯಗಳನ್ನು ಪರಿಚಯಿಸಿದ ಸಾರಿಗೆ ಸಂಸ್ಥೆ!

KSRTC ಬಸ್ನಲ್ಲಿ ಪ್ರಯಾಣ ಮಾಡುವ ಜನರಿಗೆ ಗುಡ್ ನ್ಯೂಸ್: ಹೊಸ ನಿಯಮಗಳು ಹಾಗೂ ಸೌಲಭ್ಯಗಳನ್ನು ಪರಿಚಯಿಸಿದ ಸಾರಿಗೆ ಸಂಸ್ಥೆ!

KSRTC ಸರಕಾರಿ ಬಸ್ಗಳಲ್ಲಿ ಪ್ರಯಾಣಿಸೋ ಪ್ರಯಾಣಿಕರಿಗೆ ಸಾರಿಗೆ ಸಂಸ್ಥೆಯು ಹೊಸ ನಿಯಮಗಳ ಜೊತೆಗೆ ಹೊಸ ಸೌಲಭ್ಯಗಳನ್ನು ನೀಡಿ ಹೊಸ ವರ್ಷಕ್ಕೆ ನೀಡುವ ಮೂಲಕ ಸಿಹಿ ಸುದ್ದಿ ಕೊಟ್ಟಿದ್ದ ಎಂದು ಹೇಳಬಹುದು. ಈ ಒಂದು ನಿಯಮಗಳ ಜೊತೆಗೆ ಸೌಲಭ್ಯಗಳು ನೀಡುವ ಉದ್ದೇಶ ಪ್ರಯಾಣಿಕರು ತಮ್ಮ ಪ್ರಯಾಣವನ್ನು ಆರಾಮದಾಯಕವಾಗಿ ಆನಂದಿಸಲಿ ಎಂದು. ಸಾರಿಗೆ ಸಂಸ್ಥೆಯಾಗಿ ಹೆಜ್ಜೆ ಶ್ಲಾಘನೀಯ ಎಂದು ಹೇಳಬಹುದು. ಇನ್ನು ಹೆಚ್ಚಿನ ವಿವರ ಕೆಳಗೆ ನೀಡಲಾಗಿದೆ ಪೂರ್ತಿ ಓದಿ.

ಹೊಸ ನಿಯಮಗಳು ಮತ್ತು ಸೌಲಭ್ಯಗಳು ಏಕೆ?

KSRTC ಸರಕಾರಿ ಬಸ್ಗಳಲ್ಲಿ ಪ್ರಯಾಣಿಸೋ ಪ್ರಯಾಣಿಕರ ಸಂಖ್ಯೆಯಲ್ಲಿ ನಿರಂತರವಾಗಿ ಹೆಚ್ಚಳವಾಗುತ್ತಿರುವುದನ್ನು ಸಾರಿಗೆ ಸಂಸ್ಥೆಯು ಗಮನದಲ್ಲಿಟ್ಟುಕೊಂಡು ಬಸ್ನಲ್ಲಿ ಪ್ರಯಾಣಿಸುವ ಪ್ರಯಾಣಿಕರಿಗೆ ಯಾವುದೇ ರೀತಿಯ ತೊಂದರೆಗಳು ಉಂಟಾಗದಂತೆ ಮತ್ತು ಅವರ ಪ್ರಯಾಣ ಆರಂಭದಾಯಕವಾಗಿರಬೇಕು ಎಂದು ಈ ಸೌಲಭ್ಯಗಳನ್ನು ಮತ್ತು ಹೊಸ ನಿಯಮಗಳನ್ನು ಜಾರಿಗೊಳಿಸಿದ.

ಹೊಸ ನಿಯಮಗಳು ಹಾಗೂ ಸೌಲಭ್ಯಗಳ ವಿವರ:

ಆನ್ಲೈನ್ (Online) ಪಾವತಿ ಆಯ್ಕೆ

ಪ್ರಯಾಣಿಕರು ತಮ್ಮ ಟಿಕೆಟ್ ತೆಗೆದುಕೊಳ್ಳುವಾಗ ಸಾಕಷ್ಟು ಬಾರಿ ಚಿಲ್ಲರೆ ನೀಡುವ ಹಾಗೂ ತೆಗೆದುಕೊಳ್ಳುವ ಸಂದರ್ಭಗಳಲ್ಲಿ ಸಮಸ್ಯೆ ಉಂಟಾಗಬಾರದು ಎಂದು ಸಾರಿಗೆ ಸಂಸ್ಥೆಯು ಆನ್ಲೈನ್ (online) ಪಾವತಿ ಆಯ್ಕೆಯನ್ನು ಪರಿಚಯಿಸಿದೆ. ಪ್ರಯಾಣಿಕರು ಟಿಕೆಟ್ ತೆಗೆದುಕೊಳ್ಳುವಾಗ ಈಗ ಹಣವನ್ನು ಸುಲಭವಾಗಿ ಮೊಬೈಲ್ ಮುಖಾಂತರ ಪಾವತಿಸಬಹುದು. ಈ ಒಂದು ಆನ್ಲೈನ್ ಪಾವತಿ ಆಯ್ಕೆಯು ಗ್ರಾಹಕರಲ್ಲಿ ಸಂತಸ ಮೂಡಿಸಿರುವುದಂತೂ ಸುಳ್ಳಲ್ಲ. ಇದೊಂದು ಉತ್ತಮ ಆಯ್ಕೆ ಎಂದು ಹೇಳಬಹುದು.

ಪ್ರಯಾಣಿಕರಿಗೆ ವರ್ತನೆಯ ಮಾರ್ಗಸೂಚಿಗಳು

ಬಸ್ನಲ್ಲಿ ಪ್ರಯಾಣಿಸುವಾಗ ಪ್ರಯಾಣಿಕರ ವರ್ತನೆ ಮತ್ತು ಅವರ ನಡವಳಿಕೆಯಿಂದ ಬೇರೆ ಪ್ರಯಾಣಿಕರಿಗೆ ತೊಂದರೆಯಾಗದಂತೆ ಪ್ರಯಾಣ ಮಾಡಲು ಈ ಕೆಳಗಿನ ನಿಯಮಗಳನ್ನು ಸಾರಿಗೆ ಸಂಸ್ಥೆ ಜಾರಿಗೆ ತಂದಿದೆ.

  • ಬಸ್ನಲ್ಲಿ ಪ್ರಯಾಣಿಸುವಾಗ ಪ್ರಯಾಣಿಕರು ತಮ್ಮ ಬಳಿ ಇರುವ ಮೊಬೈಲ್ ನಲ್ಲಿ ಯಾವುದೇ ರೀತಿಯ ಸಂಗೀತವನ್ನು ಇದರ ಪ್ರಯಾಣಿಕರಿಗೆ ತೊಂದರೆಯಾಗುವಂತೆ ಕೇಳಬಾರದು.
  • ಇತರೆ ಪ್ರಯಾಣಿಕರಿಗೆ ತೊಂದರೆ ಆಗುವಂತೆ ಯಾವುದೇ ರೀತಿಯ ಅಹಿತಕರ ವರ್ತನೆಗಳನ್ನು ಮಾಡಬಾರದು.
  • ಈ ನಿಯಮಗಳನ್ನು ಉಲ್ಲಂಘಿಸುವ ಪ್ರಯಾಣಿಕರಿಗೆ ಕಂಡಕ್ಟರ್ ಗಳು ಸಾರಿಗೆ ಸಂಸ್ಥೆಯ ವತಿಯಿಂದ ದಂಡ ವಿಧಿಸಬಹುದು.

ಈ ನಿಯಮಗಳಿಂದ ಆಗುವ ಪ್ರಯೋಜನಗಳೇನೆಂದರೆ ಯಾರೆಲ್ಲ ಪ್ರಯಾಣಿಕರು ನಮ್ಮ ಕೆಎಸ್ಆರ್ಟಿಸಿ ಸರ್ಕಾರಿ ಬಸ್ಗಳಲ್ಲಿ ಪ್ರಯಾಣಿಸುತ್ತಾರೋ ಅವರೆಲ್ಲರಿಗೂ ಸಹ ಒಂದು ಒಳ್ಳೆಯ ಪ್ರಯಾಣದ ಅನುಭವವೊಂದು ಖಂಡಿತ ಆಗುತ್ತದೆ. ಮತ್ತು ಡಿಜಿಟಲ್ ಪಾವತಿ ಆಯ್ಕೆಯನ್ನು ಜಾರಿಗೆ ತಂದಿರುವುದು ಪ್ರಯಾಣಿಕರಿಗೆ ಸಾಕಷ್ಟು ಅನುಕೂಲಕರವಾಗುವುದಂತೂ ಸತ್ಯ. ಸಾರಿಗೆ ಸಂಸ್ಥೆಯ ಈ ಒಂದು ಹೆಜ್ಜೆಯು ಪ್ರಯಾಣಿಕರಿಗೆ ತುಂಬಾ ಸಹಾಯದಾಯಕವಾಗುವುದು ಎಂದು ಹೇಳಬಹುದು.

Leave a Comment