ಗೃಹಲಕ್ಷ್ಮಿ ಯೋಜನೆಯ 16ನೇ ಕಂತಿನ ಹಣ ಎಲ್ಲಾ ಫಲಾನುಭವಿಗಳ ಖಾತೆಗಳಿಗೆ ಜಮಾ ಆಗಲು ಶುರು! ಇಲ್ಲಿದೆ ನೋಡಿ Proof! Gruhalakshmi 16th Installment Credited
Gruhalakshmi 16th Installment Credited: ಎಲ್ಲರಿಗೂ ನಮಸ್ಕಾರ ಸ್ನೇಹಿತರೇ, ಈ ಒಂದು ಹೊಸ ಲೇಖನಕ್ಕೆ ತಮ್ಮೆಲ್ಲರಿಗೂ ಸ್ವಾಗತ, ಈ ಲೇಖನದಲ್ಲಿ ಗೃಹಲಕ್ಷ್ಮಿ ಯೋಜನೆಯ 16ನೇ ಕಂತಿನ ಹಣ ಏನಿದೆ ಅದು ರಾಜ್ಯದ ಎಲ್ಲಾ ಫಲಾನುಭವಿಗಳ ಖಾತೆಗಳಿಗೆ ಜಮಾ ಆಗಲು ಶುರುವಾಗಿದೆ. ಇದರ ಬಗ್ಗೆ ಸಂಪೂರ್ಣ ಮಾಹಿತಿಯನ್ನು ಈ ಒಂದು ಲೇಖನದಲ್ಲಿ ನಿಮಗೆ ಸಾಕ್ಷಿ ಸಮೇತ ತಿಳಿಸಲು ಹೊರಟಿದ್ದೇವೆ. ಲೇಖನವನ್ನು ಸಂಪೂರ್ಣವಾಗಿ ಓದಿರಿ.
Table of Contents
ಸ್ನೇಹಿತರೆ ಗೃಹಲಕ್ಷ್ಮಿ ಯೋಜನೆಯ 15ನೇ ಕಂತಿನ ಹಣ ಜಮಾ ಆಗಿ ಸುಮಾರು ಮೂರು ತಿಂಗಳು ಕಳೆದರೂ ಸಹ 16ನೇ ಕಂತಿನ ಗೃಹಲಕ್ಷ್ಮಿ ಹಣದ ಬಗ್ಗೆ ಯಾವುದೇ ರೀತಿಯ ಮಾಹಿತಿ ಸರ್ಕಾರದ ಕಡೆಯಿಂದ ಇರಲಿಲ್ಲ ಹೀಗಾಗಿ ರಾಜ್ಯದ ಎಲ್ಲಾ ಫಲಾನುಭವಿಗಳು ರಾಜ್ಯ ಸರ್ಕಾರದ ಮೇಲೆ ಕೋಪಗೊಂಡಿದ್ದರು. ಇದರ ಬೆನ್ನಲ್ಲೇ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಸಚಿವೆ ಆದಂತಹ ಶ್ರೀಮತಿ ಲಕ್ಷ್ಮಿ ಹೆಬ್ಬಾಳ್ಕರ್ ಅವರಿಗೆ ಕಾರ್ ಆಕ್ಸಿಡೆಂಟಾಗಿ ಅವರು ಆಸ್ಪತ್ರೆ ಪಾಲಾಗಿದ್ದರು.
Gruhalakshmi 16th Installment Credited
ಈ ಕಾರಣದಿಂದಾಗಿ ಅವರು ಗೃಹಲಕ್ಷ್ಮಿ ಯೋಜನೆ ಬಗ್ಗೆ ಯಾವುದೇ ರೀತಿಯ ಪ್ರತಿಕ್ರಿಯೆಯನ್ನು ನೀಡಿದಲಿಲ್ಲ. ಆದರೆ ಕೆಲ ದಿನಗಳ ಹಿಂದೆ ಅವರು ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿ ಮನೆಗೆ ಕ್ಷೇಮವಾಗಿ ತಲುಪಿದ್ದರು. ಆಗ ಗೃಹಲಕ್ಷ್ಮಿ ಯೋಜನೆ ಬಗ್ಗೆ ಕೇಳಿದಾಗ ಇನ್ನು ಕೆಲವೇ ದಿನಗಳಲ್ಲಿ ಎಲ್ಲಾ ಫಲಾನುಭವಿಗಳ ಖಾತೆಗಳಿಗೆ 16ನೇ ಕಂತಿನ 2000 ಜಮಾ ಮಾಡಲಿದ್ದೇವೆ ಅಂತ ತಿಳಿಸಿದರು.
ಅದೇ ರೀತಿ ಅವರು ಹೇಳಿದ ಹಾಗೇನೆ ಗೃಹಲಕ್ಷ್ಮಿ ಯೋಜನೆಯ 16ನೇ ಕಂತಿನ ಹಣವನ್ನು ಎಲ್ಲಾ ಫಲಾನುಭವಿಗಳ ಬ್ಯಾಂಕ್ ಖಾತೆಗಳಿಗೆ ಕಳೆದ ತಿಂಗಳು ಫೆಬ್ರವರಿ 25ನೇ ತಾರೀಖಿನಿಂದ ಜಮಾ ಆಗಲು ಶುರುವಾಗಿದೆ. ಹೌದು ಸ್ನೇಹಿತರೆ, ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಅವರು ಹೇಳಿದ ಹಾಗೆಯೇ ಎಲ್ಲಾ ಫಲಾನುಭವಿಗಳ ಖಾತೆಗಳಿಗೆ ಹದಿನಾರನೇ ಕಂತಿನ ಗೃಹಲಕ್ಷ್ಮಿ ಹಣ ಜಮಾ ಆಗಲು ಶುರುವಾಗಿದೆ.
ಇನ್ನು ಯಾವ ಫಲಾನುಭವಿಗಳ ಖಾತೆಗಳಿಗೆ 16ನೇ ಕಂತಿನ ಹಣ ಜಮಾ ಆಗಿಲ್ಲವೋ ಅಂತವರಿಗೆ ಇನ್ನು ಕೆಲವೇ ದಿನಗಳಲ್ಲಿ ಅಂದರೆ ಈ ಮಾರ್ಚ್ ತಿಂಗಳ 15ನೇ ತಾರೀಕು ಮುಗಿಯುವುದರ ಒಳಗೆ 16ನೇ ಕಂತಿನ ಗೃಹಲಕ್ಷ್ಮಿ ಹಣ ಸಂಪೂರ್ಣವಾಗಿ ಜಮಾ ಆಗಲಿದೆ.
16ನೇ ಕಂತಿನ ಹಣ ಜಮಾ ಆಗಿರುವ ಬಗ್ಗೆ ಸಾಕ್ಷಿ!
ಸ್ನೇಹಿತರೆ ಗೃಹಲಕ್ಷ್ಮಿ ಯೋಜನೆಯ 16ನೇ ಕಂತಿನ ಹಣ ಏನಿದೆ ಅದು ಫಲಾನುಭವಿಗಳ ಬ್ಯಾಂಕ್ ಖಾತೆಗಳಿಗೆ ಜಮಾ ಆಗಿರುವ ಬಗ್ಗೆ ಸಾಕ್ಷಿಯನ್ನು ಈ ಕೆಳಗೆ ನೀಡಲಾಗಿದೆ ನೀವು ಅದನ್ನು ನೋಡಬಹುದು. ಇದು ಶಿವಮೊಗ್ಗ ಜಿಲ್ಲೆಯ ಒಂದು ಮಹಿಳಾ ಫಲಾನುಭವಿಯ ಖಾತೆಗೆ 16ನೇ ಕಂತಿನ ಹಣ ಜಮಾ ಆಗಿರುವ ಬಗ್ಗೆ Screenshot ಸಾಕ್ಷಿ ಆಗಿದೆ.
