Ration Card Update: ಗುಡ್ ನ್ಯೂಸ್! ರೇಷನ್ ಕಾರ್ಡ್ ತಿದ್ದುಪಡಿ ಪ್ರಾರಂಭ! ತಿದ್ದುಪಡಿ ಮಾಡಲು ಈ  ಎಲ್ಲಾ ದಾಖಲೆಗಳು ಕಡ್ಡಾಯ!

Ration Card Update: ಗುಡ್ ನ್ಯೂಸ್! ರೇಷನ್ ಕಾರ್ಡ್ ತಿದ್ದುಪಡಿ ಪ್ರಾರಂಭ! ತಿದ್ದುಪಡಿ ಮಾಡಲು ಈ  ಎಲ್ಲಾ ದಾಖಲೆಗಳು ಕಡ್ಡಾಯ!

Ration Card Update: ಎಲ್ಲರಿಗೂ ನಮಸ್ಕಾರ ಸ್ನೇಹಿತರೆ ಈ ದಿನದ ಹೊಸ ಲೇಖನಕ್ಕೆ ತಮ್ಮೆಲ್ಲರಿಗೂ ಆದರದ ಸ್ವಾಗತ, ಇಂದಿನ ಈ ಲೇಖನದಲ್ಲಿ ರಾಜ್ಯ ಸರ್ಕಾರದಿಂದ ರೇಷನ್ ಕಾರ್ಡ್ ಹೊಂದಿರುವ ಫಲಾನುಭವಿಗಳಿಗೆ ಒಂದು ಗುಡ್ ನ್ಯೂಸ್ ನೀಡಲಾಗಿದೆ. ಅದರ ಬಗ್ಗೆ ಈ ಲೇಖನದಲ್ಲಿ ತಮ್ಮೆಲ್ಲರಿಗೂ ತಿಳಿಸಲು ಹೊರಟಿದ್ದೇವೆ. ಈ ಲೇಖನವನ್ನು ಸಂಪೂರ್ಣವಾಗಿ ಓದಿರಿ ಹಾಗೂ ಈ ಒಂದು ವಿಷಯದ ಬಗ್ಗೆ ಪೂರ್ತಿ ಮಾಹಿತಿ ಪಡೆದುಕೊಳ್ಳಿ.

ಸ್ನೇಹಿತರೆ ತಮಗೆಲ್ಲರಿಗೂ ತಿಳಿದಿರುವ ಹಾಗೆ ಈಗಾಗಲೇ ಹೊಸ ರೇಷನ್ ಕಾರ್ಡ್ ಗೆ ಕೇವಲ ಒಂದು ಗಂಟೆ ಕಾಲಾವಕಾಶವನ್ನು ನೀಡಿ ಕಳೆದ ಎರಡು ಮೂರು ಬಾರಿ ಹೊಸ ರೇಷನ್ ಕಾರ್ಡ್ ಮಾಡಿಸಿಕೊಳ್ಳಲು ರಾಜ್ಯದ ಜನತೆಗೆ ಸರ್ಕಾರವು ಅವಕಾಶ ನೀಡಿತ್ತು. ಆದರೆ ತಿದ್ದುಪಡಿಗಾಗಿ ರಾಜ್ಯ ಸರ್ಕಾರದಿಂದ ಯಾವುದೇ ರೀತಿಯ ಅವಕಾಶ ನೀಡಿರಲಿಲ್ಲ.

ಆದರೆ ಈಗ ರಾಜ್ಯದ ಜನತೆಗೆ ಒಂದು ಗುಡ್ ನ್ಯೂಸ್ ಎಂದೇ ಹೇಳಬಹುದು. ಅದೇನೆಂದರೆ ನಮ್ಮ ಕರ್ನಾಟಕ ರಾಜ್ಯದಲ್ಲಿ ಯಾರಿಲ್ಲ ರೇಷನ್ ಕಾರ್ಡನ್ನು ಹೊಂದಿದ್ದರು ಅಂತಹವರಿಗೆ ರಾಜ್ಯ ಸರ್ಕಾರವು ತಮ್ಮ ರೇಷನ್ ಕಾರ್ಡ್ ನಲ್ಲಿ ತಿದ್ದುಪಡಿ ಮಾಡಿಸಿಕೊಳ್ಳಲು ಅವಕಾಶವನ್ನು ಕಲ್ಪಿಸಿಕೊಟ್ಟಿದೆ. ಈ ಒಂದು ಅವಕಾಶವನ್ನು ತಾವು ಸದುಪಯೋಗಪಡಿಸಿಕೊಳ್ಳಬೇಕಾಗಿ ಕೇಳಿಕೊಳ್ಳುತ್ತೇವೆ.

ಹಾಗೂ ರೇಷನ್ ಕಾರ್ಡ್ ತಿದ್ದುಪಡಿ ಮಾಡಿಸಿಕೊಳ್ಳಲು ಯಾವೆಲ್ಲಾ ಪ್ರಮುಖ ದಾಖಲೆಗಳು ಬೇಕು ಹಾಗೂ ಯಾರಿಲ್ಲ ಈ ಒಂದು ರೇಷನ್ ಕಾರ್ಡ್ ತಿದ್ದುಪಡಿಗಾಗಿ ಅರ್ಹರು ಎಂಬುದನ್ನು ಮತ್ತು ರೇಷನ್ ಕಾರ್ಡ್ ತಿದ್ದುಪಡಿಯಲ್ಲಿ ಏನೆಲ್ಲ ಮಾಡಿಸಿಕೊಳ್ಳಬಹುದು ಎಂಬ ಸಂಪೂರ್ಣ ಮಾಹಿತಿಯನ್ನು ಈ ಕೆಳಗಿನ ಲೇಖನದಲ್ಲಿ ನೀಡಿದ್ದೇವೆ ಪೂರ್ತಿಯಾಗಿ ಓದಿರಿ.

ತಿದ್ದುಪಡಿಗೆ ಅರ್ಜಿ ಹೇಗೆ ಸಲ್ಲಿಸುವುದು?

ನೀವೇನಾದರೂ ನಿಮ್ಮ ರೇಷನ್ ಕಾರ್ಡ್ ನಲ್ಲಿ ಯಾವುದಾದರೂ ತಿದ್ದುಪಡಿಯನ್ನು ಮಾಡಿಸಿಕೊಳ್ಳಲು ಬಯಸಿದರೆ ತಮ್ಮ ಹತ್ತಿರದ (ಗ್ರಾಮ ಒನ್, ಬೆಂಗಳೂರು ಒನ್, ಕರ್ನಾಟಕ ಒನ್) ಕೇಂದ್ರಗಳಲ್ಲಿ ಅಗತ್ಯ ದಾಖಲೆಗಳೊಂದಿಗೆ ಭೇಟಿ ನೀಡುವ ಮೂಲಕ ನಿಗದಿಪಡಿಸಲಾದ ಸಮಯದಲ್ಲಿ ತೆರಳಿ ತಿದ್ದುಪಡಿಗೆ ಅರ್ಜಿಯನ್ನು ಸಲ್ಲಿಸಬಹುದು.

ರೇಷನ್ ಕಾರ್ಡ್ ತಿದ್ದುಪಡಿ ಗೋಸ್ಕರ ನಿಗದಿಪಡಿಸಲಾದ ಸಮಯ ಈ ಕೆಳಗಿನಂತಿದೆ:

ತಿದ್ದುಪಡಿ ಮಾಡಿಸಲು ಬಯಸುವವರು ಬೆಳಿಗ್ಗೆ 10 ಗಂಟೆಯಿಂದ ಸಂಜೆ 5 ಗಂಟೆಗಳ ಒಳಗಾಗಿ ತಮ್ಮ ರೇಷನ್ ಕಾರ್ಡ್ ತಿದ್ದುಪಡಿಗಾಗಿ ಅರ್ಜಿಯನ್ನು ಸಲ್ಲಿಸಲು ಸರ್ಕಾರದಿಂದ ಅವಕಾಶವನ್ನು ಕಲ್ಪಿಸಿಕೊಡಲಾಗಿದೆ.

ರೇಷನ್ ಕಾರ್ಡ್ ತಿದ್ದುಪಡಿಗಾಗಿ ಬೇಕಾಗುವ ದಾಖಲೆಗಳು:

  • ರೇಷನ್ ಕಾರ್ಡ್
  • ಆಧಾರ್ ಕಾರ್ಡ್
  • ಆಧಾರ್ ಕಾರ್ಡ್ ಲಿಂಕ್ ಆಗಿರುವ ಮೊಬೈಲ್ ಸಂಖ್ಯೆ
  • ಆದಾಯ ಪ್ರಮಾಣ ಪತ್ರ
  • ಜನನ ಪ್ರಮಾಣ ಪತ್ರ (ವಿವರವನ್ನು ಕೆಳಗೆ ನೀಡಿದ್ದೇವೆ)
  • ಐದು ವರ್ಷದ ಒಳಗಿನ ಮಕ್ಕಳ ಹೆಸರನ್ನು ರೇಷನ್ ಕಾರ್ಡ್ ನಲ್ಲಿ ಸೇರಿಸಲು ಆಧಾರ್ ಕಾರ್ಡ್ ಹಾಗೂ ಆಧಾರ್ ಕಾರ್ಡ್ ಗೆ ಲಿಂಕ್ ಆಗಿರುವ ಮೊಬೈಲ್.
  • ಮತ್ತು ಮಕ್ಕಳ ಜನನ ಪ್ರಮಾಣ ಪತ್ರ
  • ಆರು ವರ್ಷ ಮೇಲ್ ಪಟ್ಟ ಮಕ್ಕಳ ಹೆಸರನ್ನು ಸೇರಿಸಲು ಅವರಾಧಾರ್ ಕಾರ್ಡ್ ಹಾಗೂ ಆದಾಯ ಪ್ರಮಾಣ ಪತ್ರ ಬೇಕಾಗುತ್ತದೆ.
  • ಮದುವೆ ಆದವರ ಹೆಸರನ್ನು ಸೇರಿಸಲು ಅಥವಾ ತೆಗೆದು ಹಾಕಲು ಅವರ ಮದುವೆ ನೋಂದಣಿ ಪತ್ರ ಅಥವಾ ಮದುವೆ ಪತ್ರಿಕೆ ಬೇಕಾಗುತ್ತದೆ.

Leave a Comment