SSLC & 2nd PUC Time Table: ವಿದ್ಯಾರ್ಥಿಗಳ ಗಮನಕ್ಕೆ 10ನೇ ತರಗತಿ ಮತ್ತು 2nd ಪಿಯುಸಿ ಪರೀಕ್ಷಾ ವೇಳಾಪಟ್ಟಿ ಬಿಡುಗಡೆ! ಪೂರ್ತಿ ಮಾಹಿತಿ ಇಲ್ಲಿದೆ!
ಎಲ್ಲರಿಗೂ ನಮಸ್ಕಾರ ಸ್ನೇಹಿತರೆ ಈ ಒಂದು ಲೇಖನಕ್ಕೆ ತಮ್ಮೆಲ್ಲರಿಗೂ ಸ್ವಾಗತ ಈ ಲೇಖನದಲ್ಲಿ ನಾವು ನಿಮಗೆ ಎಸ್ ಎಸ್ ಎಲ್ ಸಿ ಹಾಗೂ ದ್ವಿತೀಯ ಪಿಯುಸಿ ವಿದ್ಯಾರ್ಥಿಗಳಿಗೆ ಅವರ ಪರೀಕ್ಷಾ ವೇಳಾಪಟ್ಟಿ ಬಿಡುಗಡೆ ಆಗಿರುವ ಬಗ್ಗೆ ಸಂಪೂರ್ಣ ಮಾಹಿತಿಯನ್ನು ನೀಡಲು ಹೊರಟಿದ್ದೇವೆ. ಲೇಖನವನ್ನು ಪೂರ್ತಿಯಾಗಿ ಓದಿರಿ.
ನಮ್ಮ ರಾಜ್ಯದ ಎಲ್ಲಾ 10ನೇ ತರಗತಿ ಹಾಗೂ 2nd ಪಿಯುಸಿ ವಿದ್ಯಾರ್ಥಿಗಳು ಇನ್ನೇನು ಮುಂಬರುವ ತಮ್ಮ ಪರೀಕ್ಷೆಗಳಿಗೆ ಕಾಯುತ್ತಿದ್ದರು. ಆದರೆ ಯಾರಿಗೂ ಸಹ ಅವರ ಮುಖ್ಯ ಪರಿಚಯ ಯಾವಾಗ ಎಂದು ತಿಳಿದಿರಲಿಲ್ಲ ಆದರೆ ಕರ್ನಾಟಕ ಶಾಲಾ ಪರೀಕ್ಷಾ ಹಾಗೂ ಮೌಲ್ಯ ನಿರ್ಣಯ ಮಂಡಳಿಯು ನಮ್ಮ ರಾಜ್ಯದ 10ನೇ ತರಗತಿ ಹಾಗೂ 2nd ಪಿಯುಸಿ ವಿದ್ಯಾರ್ಥಿಗಳ ಮುಖ್ಯ ಪರೀಕ್ಷೆಯ ಅಂತಿಮ ವೇಳಾಪಟ್ಟಿಯನ್ನು ಬಿಡುಗಡೆ ಮಾಡಿದೆ.
ಕರ್ನಾಟಕ ಶಾಲಾ ಪರೀಕ್ಷಾ ಹಾಗೂ ಮೌಲ್ಯ ನಿರ್ಣಯ ಮಂಡಳಿಯು ನಮ್ಮ ಕರ್ನಾಟಕದ 10ನೇ ತರಗತಿಯ ಹಾಗೂ 2nd ಪಿಯುಸಿ ವಿದ್ಯಾರ್ಥಿಗಳ ಅಂತಿಮ ಮುಖ್ಯ ಪರೀಕ್ಷೆಯ ಅಂತಿಮ ವೇಳಾಪಟ್ಟಿಯನ್ನು ಬಿಡುಗಡೆ ಮಾಡಿದೆ. ಮಂಡಳಿಯ ನಿಗದಿಪಡಿಸಿರುವ ವೇಳಾಪಟ್ಟಿಯ ಪ್ರಕಾರ ನೋಡುವುದಾದರೆ ಮುಂಬರುವ ಮಾರ್ಚ್ 1ನೇ ತಾರೀಖಿನಿಂದ ಮಾರ್ಚ್ 20ನೇ ತಾರೀಕಿನ ವರೆಗೂ ದ್ವಿತೀಯ ಪಿಯುಸಿ (2nd ಪಿಯುಸಿ) ಪರೀಕ್ಷೆ-1 ನಡೆಯಲಿದೆ. ಹಾಗೂ ಮಾರ್ಚ್ 21ನೇ ತಾರೀಖಿನಿಂದ ಏಪ್ರಿಲ್ 04 ನೇ ತಾರೀಕಿನವರೆಗೂ 10ನೇ ತರಗತಿಯ ಪರೀಕ್ಷೆ-1 ನಡೆಯಲಿದೆ.
ದ್ವಿತೀಯ ಪಿಯುಸಿ ಪರೀಕ್ಷಾ-1ರ ವೇಳಾಪಟ್ಟಿ | 2nd PUC Exam-1 Time Table
- ಮಾರ್ಚ್ 1 : ಕನ್ನಡ, ಅರೇಬಿಕ್
- ಮಾರ್ಚ್ 3 : ಗಣಿತ, ವ್ಯವಹಾರ ಅಧ್ಯಯನ, ಶಿಕ್ಷಣ ಶಾಸ್ತ್ರ, ತರ್ಕಶಾಸ್ತ್ರ
- ಮಾರ್ಚ್ 4 : ತಮಿಳು, ತೆಲುಗು, ಸಂಸ್ಕೃತ, ಫ್ರೆಂಚ್, ಮಲಯಾಳಂ, ಮರಾಠಿ, ಉರ್ದು
- ಮಾರ್ಚ್ 5 : ಸಂಖ್ಯಾಶಾಸ್ತ್ರ, ರಾಜ್ಯಶಾಸ್ತ್ರ
- ಮಾರ್ಚ್ 7 : ಭೌತಶಾಸ್ತ್ರ, ಇತಿಹಾಸ
- ಮಾರ್ಚ್ 10 : ಭೂಗರ್ಭ ಶಾಸ್ತ್ರ, ಲೆಕ್ಕಶಾಸ್ತ್ರ, ಗೃಹ ವಿಜ್ಞಾನ, ಐಚಿಕ ಕನ್ನಡ
- ಮಾರ್ಚ್ 12 : ಮನಃಶಾಸ್ತ್ರ, ಸಾಯನಶಾಸ್ತ್ರ, ಮೂಲ ಗಣಿತರ
- ಮಾರ್ಚ್ 13 : ಅರ್ಥಶಾಸ್ತ್ರ
- ಮಾರ್ಚ್ 15 : ಇಂಗ್ಲಿಷ್
- ಮಾರ್ಚ್ 17 : ಭೂಗೋಳಶಾಸ್ತ್ರ
- ಮಾರ್ಚ್ 18 : ಜೀವಶಾಸ್ತ್ರ, ವಿದ್ಯುನ್ಮಾನಶಾಸ್ತ್ರ, ಗಣಕ ವಿಜ್ಞಾನ, ಸಮಾಜಶಾಸ್ತ್ರ
- ಮಾರ್ಚ್ 19 : ಹಿಂದೂಸ್ತಾನಿ ಸಂಗೀತ, ಹೆಲ್ತ್ ಕೇರ್, ಬ್ಯೂಟಿ ಅಂಡ್ ವೆಲ್ನೆಸ್, ಮಾಹಿತಿ ತಂತ್ರಜ್ಞಾನ, ರಿಟೇಲ್, ಆಟೋಮೊಬೈಲ್
- ಮಾರ್ಚ್ 20 : ಹಿಂದಿ
ಇದನ್ನೂ ಓದಿ: Free Sewing Machine: ಕೇಂದ್ರದಿಂದ ಮಹಿಳೆಯರಿಗೆ ಸಿಗಲಿದೆ ಉಚಿತ ಹೊಲಿಗೆ ಯಂತ್ರ! ಅರ್ಜಿ ಸಲ್ಲಿಸುವ ಡೈರೆಕ್ಟ್ ಲಿಂಕ್ ಇಲ್ಲಿದೆ!
10ನೇ ತರಗತಿಯ ಪರೀಕ್ಷಾ-1 ರ ವೇಳಾಪಟ್ಟಿ | SSLC Exam-1 Time Table
- ಮಾರ್ಚ್ 21 : ಪ್ರಥಮ ಭಾಷೆ
- ಮಾರ್ಚ್ 24 : ಗಣಿತ
- ಮಾರ್ಚ್ 26 : ದ್ವಿತೀಯ ಭಾಷೆ
- ಮಾರ್ಚ್ 29 : ಸಮಾಜ ವಿಜ್ಞಾನ
- ಏಪ್ರಿಲ್ 2 : ವಿಜ್ಞಾನ
- ಏಪ್ರಿಲ್ 4 : ತೃತೀಯ ಭಾಷೆ
ಕರ್ನಾಟಕ ಶಾಲಾ ಪರೀಕ್ಷಾ ಹಾಗೂ ಮೌಲ್ಯ ನಿರ್ಣಯ ಮಂಡಳಿಯು ಬಿಡುಗಡೆ ಮಾಡಿರುವ 10ನೇ ತರಗತಿಯ ಹಾಗೂ 2nd ಪಿಯುಸಿ ವಿದ್ಯಾರ್ಥಿಗಳ ಅಂತಿಮ ಮುಖ್ಯ ಪರೀಕ್ಷೆಯ ಅಂತಿಮ ವೇಳಾಪಟ್ಟಿಯನ್ನು ವಿದ್ಯಾರ್ಥಿಗಳು ಮಂಡಳಿಯ ಅಧಿಕೃತ ವೆಬ್ ಸೈಟಿಗೆ kseab.karnataka.gov.in ತೆರಳಿ ವೇಳಾಪಟ್ಟಿಯನ್ನು ಡೌನ್ಲೋಡ್ ಮಾಡಿಕೊಳ್ಳುವ ಮುಖಾಂತರ ಸೂಕ್ಷ್ಮವಾಗಿ ಹಾಗೂ ಸ್ಪಷ್ಟವಾಗಿ ನೋಡಿಕೊಳ್ಳಬಹುದು.