Free Sewing Machine: ಕೇಂದ್ರದಿಂದ ಮಹಿಳೆಯರಿಗೆ ಸಿಗಲಿದೆ ಉಚಿತ ಹೊಲಿಗೆ ಯಂತ್ರ! ಅರ್ಜಿ ಸಲ್ಲಿಸುವ ಡೈರೆಕ್ಟ್ ಲಿಂಕ್ ಇಲ್ಲಿದೆ!
ಎಲ್ಲರಿಗೂ ನಮಸ್ಕಾರ ಸ್ನೇಹಿತರೆ ಈ ದಿನದ ಹೊಸ ಲೇಖನಕ್ಕೆ ತಮ್ಮೆಲ್ಲರಿಗೂ ಸ್ವಾಗತ ಇಂದು ನಾವು ನಿಮಗೆ ಕೇಂದ್ರ ಸರ್ಕಾರದವು ಮಹಿಳೆಯರಿಗೆ ಹೊಲಿಗೆ ಯಂತ್ರ ವಿತರಣೆ ಮಾಡುವ ಯೋಜನೆ ಬಗ್ಗೆ ಹೇಳಲು ಹೊರಟಿದ್ದೇವೆ. ಈ ಒಂದು ಯೋಜನೆಗೆ ನೀವು ಹೇಗೆ ಅರ್ಜಿ ಸಲ್ಲಿಸಬಹುದು. ಹಾಗೂ ಯಾವೆಲ್ಲ ದಾಖಲೆಗಳು ಬೇಕಾಗುತ್ತವೆ. ಮತ್ತು ಇನ್ನಿತರ ಎಲ್ಲಾ ಮಾಹಿತಿಗಳನ್ನು ಈ ಲೇಖನದಲ್ಲಿದ್ದೇವೆ ಪೂರ್ತಿಯಾಗಿ ಓದಿ.
ನಮ್ಮ ಭಾರತ ದೇಶದಲ್ಲಿ ನಮ್ಮ ಕೇಂದ್ರ ಸರ್ಕಾರವು ಮಹಿಳೆಯರು ಆರ್ಥಿಕ ಸ್ಥಿತಿಯನ್ನು ಉತ್ತಮಗೊಳಿಸಲು ಹಾಗೂ ಅವರು ಸ್ವಾವಲಂಬಿಯಾಗಿ ಜೀವನ ಮಾಡಲು ಸಾಕಷ್ಟು ಯೋಜನೆಗಳನ್ನು ಅವರಿಗೆ ಮೀಸಲಿಟ್ಟು ಜಾರಿಗೆ ತಂದಿದೆ. ಹೀಗೆ ಜಾರಿಗೆ ಬಂದಿರುವ ಯೋಜನೆಗಳಿಂದ ಮಹಿಳೆಯರು ಸಾಕಷ್ಟು ಲಾಭವನ್ನು ಸಹ ಪಡೆದುಕೊಂಡಿದ್ದಾರೆ. ಅದೇ ರೀತಿ ಈಗಲೂ ಸಹ ಕೇಂದ್ರ ಸರ್ಕಾರವು ಒಂದು ಯೋಜನೆಯನ್ನು ಜಾರಿಗೆ ತಂದಿದೆ ಅದು ನಮ್ಮ ದೇಶದ ಮಹಿಳೆಯರಿಗೆ ಉಚಿತ ಹೊಲಿಗೆ ಯಂತ್ರ ನೀಡುವ ಯೋಜನೆ. ಮಹಿಳೆಯರಿಗೆ ಉಚಿತ ಹೊಲಿಗೆ ಯಂತ್ರ ಸಿಗಲಿದೆ.
ಉಚಿತ ಹೊಲಿಗೆ ಯಂತ್ರ 2025: Free Sewing Machine!
ಕೇಂದ್ರ ಸರ್ಕಾರವು ಅರ್ಹತೆ ಇರುವಂತಹ ಎಲ್ಲಾ ಕುಶಲಕರ್ಮಿಗಳಿಗೆ ವಿಶ್ವಕರ್ಮ ಯೋಜನೆ ಅಡಿಯಲ್ಲಿ ಉತ್ತೇಜನ ನೀಡಲು ಮತ್ತು ಅವರನ್ನು ಪ್ರೋತ್ಸಾಹಿಸಲು ಈ ಒಂದು ಯೋಜನೆಯನ್ನು ತಂದಿದೆ. ಈ ಯೋಜನೆ ಅಡಿಯಲ್ಲಿ ಮಹಿಳೆಯರಿಗೆ ಉಚಿತ ಹೊಲಿಗೆ ಯಂತ್ರವನ್ನು ನೀಡಿ ಅವರಿಗೆ ತರಬೇತಿಯನ್ನು ಸಹ ನೀಡಲು ಸರ್ಕಾರವು ಈ ಒಂದು ಯೋಜನೆಯನ್ನು ಜಾರಿ ಮಾಡಿದೆ.
ಪ್ರಧಾನ ಮಂತ್ರಿ ವಿಶ್ವಕರ್ಮ ಯೋಜನೆ ಅಡಿಯಲ್ಲಿ 18 ವರ್ಷ ಮೇಲ್ಪಟ್ಟಿರುವ ಗ್ರಾಮೀಣ ಹಾಗೂ ನಗರದಲ್ಲಿ ವಾಸ ಮಾಡುವಂತಹ ಎಲ್ಲಾ ಕುಶಲಕರ್ಮಿಗಳಿಗೆ ಈ ಒಂದು ವಿಶ್ವಕರ್ಮ ಯೋಜನೆ ಅಡಿಯಲ್ಲಿ ಕೌಶಲ್ಯ ಅಭಿವೃದ್ಧಿಯ ತರಬೇತಿ ನೀಡಲು ಹಾಗೂ ತಾಂತ್ರಿಕ ಜ್ಞಾನ ಮತ್ತು ಬಡ್ಡಿ ರಹಿತ ಸಾಲವನ್ನು ನೀಡುವ ಯೋಜನೆ ಇದಾಗಿದೆ.
ಅರ್ಹತೆ ಇರುವ ಎಲ್ಲಾ ಫಲಾನುಭವಿಗಳಿಗೆ ಉಚಿತ ಹೊಲಿಗೆ ಯಂತ್ರವನ್ನು ಖರೀದಿಸಲು ಕೇಂದ್ರ ಸರ್ಕಾರವು ಪ್ರಧಾನ ಮಂತ್ರಿ ವಿಶ್ವಕರ್ಮ ಯೋಜನೆಯ ಅಡಿಯಲ್ಲಿ ₹15,000 ಸಾವಿರ ರೂಪಾಯಿ ಹಣವನ್ನು ಅರ್ಹ ಸಲಾನುಭವಿಗಳ ಖಾತೆಗೆ ಕೇಂದ್ರ ಸರ್ಕಾರದ ಕಡೆಯಿಂದ ಜಮಾ ಮಾಡಲಾಗುತ್ತದೆ. ಅರ್ಜಿ ಸಲ್ಲಿಸುವ ಮಹಿಳೆಯರಿಗೆ ಸಹಾಯಧನವನ್ನು ತಮ್ಮ ಬ್ಯಾಂಕ್ ಖಾತೆಯ ಮುಖಾಂತರ ಪಡೆದುಕೊಳ್ಳಬಹುದು.
ಹಾಗೂ ಈ ಒಂದು ಯೋಜನೆ ಅಡಿಯಲ್ಲಿ ಅರ್ಜಿ ಸಲ್ಲಿಸುವ ಎಲ್ಲಾ ಅರ್ಹ ಫಲಾನುಭವಿಗಳಿಗೆ 5 ದಿನಗಳಿಂದ 7 ದಿನಗಳವರೆಗೆ ಉಚಿತ ತರಬೇತಿಯನ್ನು ಕೇಂದ್ರ ಸರ್ಕಾರದಿಂದ ನೀಡಲಾಗುತ್ತದೆ.
ಅರ್ಜಿ ಸಲ್ಲಿಸಲು ಇರಬೇಕಾದ ಅರ್ಹತೆಗಳು:
- ಅರ್ಜಿ ಸಲ್ಲಿಸುವ ಅಭ್ಯರ್ಥಿಯು ಭಾರತದ ಖಾಯಂ ನಿವಾಸಿಯಾಗಿರಬೇಕು.
- ಅರ್ಜಿ ಸಲ್ಲಿಸುವ ಅಭ್ಯರ್ಥಿಯ ವಯಸ್ಸು ಕನಿಷ್ಠ 18 ವರ್ಷ ಮೇಲ್ಪಟ್ಟಿರಬೇಕು.
- ಹೋಲಿಗೆ ಯಂತ್ರವನ್ನು ಉಚ್ಚವಾಗಿ ಪಡೆಯಲು ಒಂದು ಮನೆಯಿಂದ ಒಬ್ಬ ಮಹಿಳೆ ಮಾತ್ರ ಅರ್ಜಿ ಸಲ್ಲಿಸಬಹುದು.
- ಅರ್ಜಿ ಸಲ್ಲಿಸುವ ಮಹಿಳೆ ಅಥವಾ ವ್ಯಕ್ತಿಯು ಟೈಲರಿಂಗ್ ಉದ್ಯೋಗವನ್ನು ಕಡ್ಡಾಯವಾಗಿ ಮಾಡಿಕೊಂಡಿರಬೇಕು.
- ಅರ್ಜಿ ಸಲ್ಲಿಸುವ ಅಭ್ಯರ್ಥಿಯು ಕೇಂದ್ರ ಸರ್ಕಾರದಿಂದ ಯಾವುದೇ ಯೋಜನೆ ಅಡಿ ಸಾಲವನ್ನು ಪಡೆದುಕೊಂಡಿರಬಾರದು.
- ಅರ್ಜಿ ಸಲ್ಲಿಸುವ ಅಭ್ಯರ್ಥಿಯ ಮನೆಯಲ್ಲಿ ಯಾರು ಕೂಡ ಸರ್ಕಾರಿ ಉದ್ಯೋಗದಲ್ಲಿ ಇರಬಾರದು.
ಈ ಮೇಲಿನ ಎಲ್ಲಾ ರಾಜ್ಯಗಳನ್ನು ಹೊಂದಿರುವ ಅಭ್ಯರ್ಥಿಗಳು ಈ ಯೋಜನೆ ಅಡಿಯಲ್ಲಿ ತಮ್ಮ ಅರ್ಜಿಯನ್ನು ಸಲ್ಲಿಸಬಹುದು.
ಇದನ್ನೂ ಓದಿ: ಗೃಹಲಕ್ಷ್ಮಿ ಯೋಜನೆ 16ನೇ ಕಂತಿನ ಹಣಕ್ಕೆ ಕೊನೆಗೂ ದಿನಾಂಕ ಫಿಕ್ಸ್! ಈ ದಿನ ಹಣ ಜಮಾ ಆಗೋದು ಪಕ್ಕ! Gruhalakshmi Scheme
ಅರ್ಜಿ ಸಲ್ಲಿಸಲು ಬೇಕಾಗುವ ದಾಖಲೆಗಳು:
- ರೇಷನ್ ಕಾರ್ಡ್
- ಆಧಾರ್ ಕಾರ್ಡ್
- ಬ್ಯಾಂಕ್ ಪಾಸ್ ಬುಕ್
- ವಿಳಾಸ ಪುರಾವೆ
- ಪ್ಯಾನ್ ಕಾರ್ಡ್
- ಮೊಬೈಲ್ ನಂಬರ್
- ಹಾಗೂ ಇತರೆ ದಾಖಲೆಗಳು
ಅರ್ಜಿ ಸಲ್ಲಿಸಲು ಡೈರೆಕ್ಟ್ ಲಿಂಕ್!
ಅರ್ಜಿ ಸಲ್ಲಿಸುವುದು ಹೇಗೆ?
ನೀವೇನಾದರೂ ಈ ಒಂದು ವಿಶ್ವಕರ್ಮ ಯೋಜನೆಯ ಅಡಿಯಲ್ಲಿ ಉಚಿತ ಹೋಲಿಗೆ ಯಂತ್ರ ಯೋಜನೆಗೆ ನಿಮ್ಮ ಅರ್ಜಿ ಸಲ್ಲಿಸಲು ಬಯಸಿದರೆ ಹಾಗೂ ನೀವು ನಾವು ಮೇಲೆ ನೀಡಿರುವ ಎಲ್ಲಾ ಅರ್ಹತೆಗಳನ್ನು ಹೊಂದಿದ್ದರೆ. ನಾವು ನೀಡಿರುವ ಲಿಂಕ್ ಮೇಲೆ ಕ್ಲಿಕ್ ಮಾಡುವ ಮೂಲಕ ಎಲ್ಲಾ ದಾಖಲೆಗಳನ್ನು ನೀಡಿ ನಿಮ್ಮ ಮೊಬೈಲ್ ನಲ್ಲಿ ನೀವು ಅರ್ಜಿಯನ್ನು ಸಲ್ಲಿಸಬಹುದಾಗಿದೆ. ಅಥವಾ ನಿಮಗೆ ಹತ್ತಿರದಲ್ಲಿರುವ ಯಾವುದಾದರೂ ಒಂದು ಸೇವಾ ಕೇಂದ್ರಕ್ಕೆ ತೆರಳಿ ಅಂದರೆ ಗ್ರಾಮ ಒನ್, ಬೆಂಗಳೂರು, ಒನ್ ಕರ್ನಾಟಕ ಒನ್ ಅಥವಾ ಸೈಬರ್ ಸೆಂಟರ್ಗೆ ಹೋಗುವ ಮೂಲಕ ಅಲ್ಲಿಯೂ ಕೂಡ ನಿಮ್ಮ ಅರ್ಜಿಯನ್ನು ಈ ಒಂದು ಯೋಜನೆಗೆ ಸಲ್ಲಿಸಬಹುದು.